Sunday, 13 November 2011

ಕೊರಯಾದಲ್ಲಿ ಕನ್ನಡ ರಾಜ್ಯೋತ್ಸವ


೨೦೧೧ರ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕೊರಿಯಾ ಕನ್ನಡ ಕೂಟದ ಮೂಲಕ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕೆಲ ಸದಸ್ಯರು face book ಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅದರಂತೆ ನವೆಂಬರ್ ೬ನೇ ತಾರೀಕಿನಂದು ಸೇಔಲ್ ನಲ್ಲಿ ಆಚರಿಸಲು ಎಲ್ಲರೂ ಒಪ್ಪಿಗೆ ಸೂಚಿಸಿದರು. ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೆಂದು ನಿರ್ಧರಿಸಿ ದಿನಾಂಕ ನಿಗದಿ ಮಾಡಿದ ನಂತರ ನಮ್ಮ ತಯಾರಿ, ಸಿದ್ದತೆಗಳು ನಡೆಸಲು ಕೇವಲ ೧ ತಿಂಗಳ ಕಾಲಾವಕಾಶವಿತ್ತು (ವಾಸ್ತವದಲ್ಲಿ ೧ ತಿಂಗಳು ಎಂದರೆ ಬಹಳ ಸಮಯವಿರುತ್ತದೆ, ಆದರೆ ಸದಸ್ಯರುಗಳಲ್ಲಿ ಬಹಳಷ್ಟು ಜನ ತಂತಮ್ಮ ಕಛೇರಿ ಕೆಲಸಗಳಲ್ಲಿ ತಲ್ಲಿನವಾಗಿರುವುದರಿಂದ, ಕೇವಲ ವಾರಾಂತ್ಯದಲ್ಲಿ ಮಾತ್ರ ಬೇರೆ ಕೆಲಸಗಳಿಗೆ ಸಮಯ ಹೊಂದಿಸಬಹುದು). ಬ್ರಿಜೇಶ್ ಮತ್ತು ಕಾಂತರಾಜ್ ಅವರು ಫೇಸ್ ಬುಕ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತಂತೆ ಮಾಹಿತಿಯನ್ನು ಪ್ರಕಟಿಸಿ ಸದಸ್ಯರುಗಳಲ್ಲಿ ಕೆಲವರು ಇಚ್ಛೆಯಿದ್ದಲ್ಲಿ ಸ್ವಯಂ ಸೇವಕರಾಗಿ ಮುಂದೆ ಬರಬೇಕೆಂದು ಮನವಿ ಮಾಡಿದರು. ಅದರಂತೆ ನಾನು, ನವನೀತ್, ರಾಹುಲ್, ರಾಜೇಶ್, ದಿವ್ಯ ಸುದರ್ಶನ್, ಪ್ರಶಾಂತ್, ಹರ್ಷ, ವಿಶ್ವನಾಥ್, ದೇವೇಶ್ ಮತ್ತು ಕೆಲವರು ಒಪ್ಪಿದರು. ಪ್ರತಿ ಭಾನುವಾರದ ರಾತ್ರಿಯಂದು ಎಲ್ಲರೂ ಕಾಂಫೆರೆನ್ಚೆ ಕಾಲ್ ಮೂಲಕ ತಾವು ವಹಿಸಿಕೊಳ್ಳುತ್ತಿರುವ ಜವಾಬ್ದಾರಿ, ಅದು ಕಾರ್ಯಗೊಳಿಸುವ ಬಗೆ, ರಾಜ್ಯೋತ್ಸವ ಆಚರಣೆಗೆ ಮಾಡಬೇಕಾದ ಕೆಲಸಗಳು ಇತರೆ ಸಿದ್ದತೆಗಳು ಮುಂತಾದವುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಈ ರೀತಿಯ ಚರ್ಚೆಗಳ ಮೂಲಕ ನಮಗೆಲ್ಲ ಒಂದು ಸ್ಪಷ್ಟವಾದ ಚಿತ್ರಣ ದೊರಕಿತು. ನವನೀತ್ ಅವರು ರಾಜ್ಯೋತ್ಸವ ನಡೆಸುವ ಸಭಾಂಗಣವನ್ನು ಕಾಯ್ದಿರಿಸಿದರು. ಪ್ರಶಾಂತ್ ಅವರು ನಮ್ಮ ಕನ್ನಡ ಕೂಟದ ಲಾಂಚನ ಸಿದ್ದಪಡಿಸಲು ಸಹಕರಿಸಿದರು. ದಿವ್ಯ ಸುದರ್ಶನ್ ಅವರು ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡರು, ಹಾಗೆಯೇ ವಿಶ್ವನಾಥ್, ಶ್ರೀಹರ್ಷ, ಹರ್ಷ.ವಿ.ಎಸ್ ಅವರು ಕಾರ್ಯಕ್ರಮಗಳ ನಿರ್ವಹಣೆಯ ಜವಾಬ್ದಾರಿ, ರಾಹುಲ್ ಅವರು ಊಟೋಪಚಾರದ ನಿರ್ವಹಣೆ, ಕಾಂತರಾಜ್ ಅವರು ಕಾರ್ಯಕ್ರಮ ನಿರೂಪಣೆ, ಬ್ರಿಜೇಶ್ ಅವರು ವಂದನಾರ್ಪಣೆ, ರಾಜೇಶ್ ಅವರು ಅಥಿತಿ ಸತ್ಕಾರ, ದೇವೇಶ್ ಪಟೇಲ್ ಅವರು ಫೋಟೋಗ್ರಫಿ ಯ ಜವಾಬ್ದಾರಿಯನ್ನು ವಹಿಸಿಕೊಂಡರು. ಮಗನ ಜೊತೆ ಸ್ವಲ್ಪ ದಿನ ಇರಲೆಂದು ಭಾರತದಿಂದ ಬಂದಿದ್ದ ಹಿರಿಯರಾದ ಶ್ರೀಮತಿ ಮತ್ತು ಶ್ರೀ. ನಾಗರಾಜ್ ದಂಪತಿಗಳಿಂದ ಕಾರ್ಯಕ್ರಮ ಉಧ್ಗಾತನೆ ಮತ್ತು  ಧ್ವಜಾರೋಹಣ ಮಾಡಿಸುವ ನಿರ್ಧಾರವನ್ನು ಮಾಡಿದೆವು. ಒಟ್ಟಾರೆ ಸುಮಾರು ೪೦ಜನ ಸದಸ್ಯರು ತಮ್ಮ ಬರುವಿಕೆಯನ್ನು ಖಚಿತಪಡಿಸಿದರು. ರಾಜ್ಯೋತ್ಸವ ಆಚರಣೆಯ ಹಿಂದಿನ ದಿನದಂದು ಸ್ವಯಂ ಸೇವಕರೆಲ್ಲ ಕಾಂತರಾಜ್ ಅವರ ಮನೆಯಲ್ಲಿ ಸೇರಿ, ಮಾರನೆಯ ದಿನದ ಸಮಾರಂಬವನ್ನು ನಡೆಸುವ ಬಗೆ, ವೆಳಾಪಟ್ಟಿ, ನಿರೂಪಣೆ, ನಾಡಗೀತೆಯ ತಾಲೀಮು ಮುಂತಾದವನ್ನು ಮಾಡಿದೆವು. ವಿಶ್ವನಾಥ್ ಮತ್ತು ದಂಪತಿಗಳು ದೂರದ ಗುಮಿ ಯಿಂದ ಮುಂಚಿತವಾಗಿಯೇ ಬಂದು ಕಾಂತರಾಜ್ ಅವರ ಮನೆಯಲ್ಲಿ ಉಳಿದು ನಮ್ಮ ತಾಲೀಮಿಗೆ ಜೊತೆಗೂಡಿದರು. ಹಾಗೆಯೇ ಕೆಲೊವೊಂದು ವಸ್ತುಗಳ ಖರೀದಿಯನ್ನು ಸಹ ಅಂದು ಮುಗಿಸಿದೆವು. ಮಾರನೆಯ ದಿನ ರಾಜ್ಯೋತ್ಸವವನ್ನು ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡೆವು. 
ನವೆಂಬರ್ ೬ನೇ ತಾರೀಕಿನಂದು ಬೆಳಿಗ್ಗೆ ೧೦ ಗಂಟೆಗೆಲ್ಲ ಕಾರ್ಯಕ್ರಮ ನಡೆಯುವ ಸ್ತಳದಲ್ಲಿ ಸದಸ್ಯರು ಆಗಮಿಸಲು ಶುರುಮಾಡಿದರು. ಮಳೆ ಬರುತ್ತಿದ್ದ ಕಾರಣ ದೂರದ ಕಡೆಯಿಂದ ಬರಬೇಕಿದ್ದ ಕೆಲ್ಸವರು ತಡವಾಗಿ ಬರುವುದೆಂದು ತಿಳಿಸಿದರು. ಅದರಂತೆ ೧೦.೩೦ ರ ಬದಲಾಗಿ ೧೧ ಕ್ಕೆ ಕಾರ್ಯಕ್ರಮ ಶುರುಮಾಡಬೇಕಾಯಿತು. ಕಾಂತರಾಜ್ ಅವರು ನಿರೂಪಣೆ ಶುರು ಮಾಡಿ ಮೊದಲಿಗೆ ಎಲ್ಲರಿಗೂ ಕೊರಿಯಾ ಕನ್ನಡ ಕೂಟದ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ, ನಮ್ಮ ಸಂಸ್ಕೃತಿಯಂತೆ ಮೊದಲಿಗೆ ಪ್ರಾರ್ಥನೆ ಮಾಡಲು ದಿವ್ಯಶ್ರೀ ಅವರಿಗೆ ತಿಳಿಸಿದರು. ದಿವ್ಯಶ್ರೀ ಅವರು ಒಂದು ಸೊಗಸಾದ ಭಕ್ತಿ ಪೂರ್ಣವಾದ ಪ್ರಾರ್ಥನೆ ಹಾದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರ್ಥನೆಯ ನಂತರ ನವನೀತ್ ಅವರು ಸ್ವಾಗತ ಭಾಷಣವನ್ನು ಮಾಡಿದರು. ಭಾಷಣದ ನಡುವೆಯೇ ಕೊರಿಯಾ ಕನ್ನಡ ಕೂಟದ ಕಿರು ಪರಿಚಯ, ಶುರುವಾದ ರೀತಿ, ಸಾಗಿ ಬಂದ ದಾರಿ, ಇಲ್ಲಿಯವರೆಗೆ ನಡೆಸಿದ ಕಾರ್ಯಕ್ರಮಗಳು ಮುಂತಾದವುಗಳ ಪರಿಚಯ ಮಾಡಿ KKK ಯ ಒಂದು video ತುಣುಕನ್ನು ಪ್ರದರ್ಶಿಸಿದರು. ಸ್ವಾಗತ ಭಾಷಣದ ನಂತರ ವಿಶ್ವನಾಥ್ ಅವರು ಮುಖ್ಯ ಅತ್ಹಿತಿಗಳಾದ ಶ್ರೀ. ನಾಗರಾಜ್ ಅವರ ಕಿರು ಪರಿಚಯವನ್ನು ಮಾಡಿಕೊಟ್ಟು ಅವರನ್ನು ಕನ್ನಡ ಧ್ವಜಾರೋಹಣ ಮತ್ತು ದೀಪ ಬೆಳಗಿಸಲು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಶ್ರೀ. ನಾಗರಾಜ್ ಅವರು ಧ್ವಜಾರೋಹಣ ಮಾಡಿದಾಗ ಎಲ್ಲ ಸದಸ್ಯರು ಎದ್ದು ನಿಂತು ನಾಡಗೀತೆಯನ್ನು ಹಾಡಿದೆವು. ನಂತರ ಕನ್ನಡಾಂಬೆಯ ಚಿತ್ರ ಅನಾವರಣ ಮತ್ತು ದೀಪ ಬೆಳಗುವಿಕೆಯು ನಡೆಯಿತು. ದೀಪ ಬೆಳಗಿಸಿ ಮುಕ್ಯ ಅಥಿತಿಗಳು ಒಂದೆರಡು ಹಿತನುಡಿಗಳನ್ನು ನೀಡಿದರು. ಮುಖ್ಯವಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಬಗೆಯ ಬಗ್ಗೆ ಮಾತನಾಡಿ ಎಲ್ಲ ಕನ್ನಡಿಗರು ತಂತಮ್ಮ ಮನೆಗಳಲ್ಲಿ, ಸ್ನೇಹಿತರೊಂದಿಗೆ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಭಾಷೆಗೆ ಯಾವುದೇ ಆಪತ್ತಿಲ್ಲ ಎಂಬುದನ್ನು ಒತ್ತಿ ಹೇಳಿದರು. ಹಾಗೆಯೇ ದೂರದ ಕೊರಿಯಾದಲ್ಲಿ ಕನ್ನಡ ರಾಜ್ಯೋತ್ಸವದ ಮುಕ್ಯ ಅಥಿತಿಯಾಗಿ ಮಾತನಾಡುತ್ತಿರುವುದು ತಮಗೆ ಒಂದು ಮರೆಯಲಾಗದ ಘಟನೆ ಎಂದು ಹೇಳಿ ಕೊರಿಯಾ ಕನ್ನಡ ಕೂಟದ ಎಲ್ಲರಿಗೂ ಅಭಾರಿ ಏನು ಹೇಳಿ ವಂದನೆಗಳನ್ನು ತಿಳಿಸಿದರು. ಮುಖ್ಯ ಅಥಿತಿಗಳ ಹಿತನುಡಿಗಳ ನಂತರ ಶ್ರೀಹರ್ಷ ಅವರು ಚೆಲುವ ಕನ್ನಡ ನಾಡು ಎಂಬ ಕರ್ನಾಟಕದ ಸಂಪೂರ್ಣ ಪರಿಚಯ ಮಾಡಿಕೊಡುವ ಪ್ರಸ್ತುತಿ ನೀಡಿದರು. ಮುಖ್ಯವಾಗಿ ಕನ್ನಡ ನಾಡಿನ ಹೆಸರು, ಇತಿಹಾಸ, ಕಲೆ, ಸಂಸ್ಕೃತಿ, ಭಾಷೆ, ಪ್ರವಾಸೋದ್ಯಮ, ಉನ್ನತ ವ್ಯಕ್ತಿಗಳು ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲಿದರು. ಕೊನೆಯಲ್ಲಿ ಕರ್ನಾಟಕದ ಉತ್ತಮ ಪ್ರೇಕ್ಷಣೀಯ ಸ್ತಳಗಳ ಒಂದು video ತುಣುಕನ್ನು ಸಹ ಪ್ರದರ್ಶಿಸಿದರು. ಆ ಪ್ರಸ್ತುತಿ ಬಹಳ ಸೊಗಸಾಗಿ ಮೂಡಿಬಂದಿತು. ಕರ್ನಾಟಕದ ಪ್ರಸ್ತುತಿಯ ನಂತರ ಕೇಶವ ಪ್ರಸಾದ್ ಅವರು ಅಣ್ಣಾವ್ರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಬಹಳ ಸೊಗಸಾಗಿ ಹಾಡಿದರು. ಅವರ ಹಾಡಿನ ಮೋದಿ ಎಷ್ಟು ಚೆನ್ನಾಗಿತ್ತೆಂದರೆ ಎಲ್ಲರೂ ಸಹ ಅವರ ದನಿಗೆ ಜೊತೆಗೂಡಿದರು ಮತ್ತು once more once more ಎಂದು ಕೂಗಿದರು. ಕೇಶವ ಪ್ರಸಾದ್ ಹೇಳಿದಂತೆ ಇದು ತುಂಬಿದ ಸಭೆಯಲ್ಲಿ ಅವರ ಮೊದಲ ಹಾಡಂತೆ. ಯಾರಿಗೂ ಸಹ ಅವರು ಮೊದಲ ಬಾರಿಗೆ ಹಾಡುತ್ತಿದ್ದರೆ ಎಂದು ಅನಿಸಲೇ ಇಲ್ಲ. ಉತ್ತಮ ಹಾಡಿನ ನಂತರ ರಾಹುಲ್ ಗೌಡ ಅವರು ಕನ್ನಡ ಮತ್ತು ಕರ್ನಾಟಕದ ಪ್ರಾಮುಕ್ಯತೆ ಒಂದು ಅವಲೋಕನ ಎಂಬ ವಿಷಯದ ಬಗ್ಗೆ ಸೊಗಸಾಗಿ ಮಾತನಾಡಿದರು. ಅಂಕಿ ಅಂಶಗಳ ಸಮೇತ ನಮ್ಮ ಸಂಸೃತಿ, ಭಾಷೆಯ ಮೇಲೆ ನಡೆಯುತ್ತಿರುವ ದಾಳಿ, ನಾವು ಇದನ್ನು ಎದುರಿಸುವ ಬಗೆ ಮುಂತಾದವುಗಳ ಬಗ್ಗೆ ಬಹು ಆಳವಾಗಿ ವಿಷಯವನ್ನು ಮಂಡಿಸಿದರು. ರಾಹುಲ್ರ ನಂತರ ರಾಜೇಶ್ ನಾಯರ್ ಅವರು ಪುನೀತ್ ರಾಜಕುಮಾರ್ ಅವರ ಚಿತ್ರದ ನಿನ್ನಿಂದಲೇ ನಿನ್ನಿಂದಲೇ ಹಾಡನ್ನು ಸೊಗಸಾಗಿ ಹಾಡಿದರು. ಈ ಹಾಡಿನ ನಂತರ ವಿಶ್ವನಾತ್ ಅವರು ಕೊರಿಯಾ ನಾ ಕಂಡಂತೆ ಎಂಬ ವಿಷಯವನ್ನು ಪ್ರಸ್ತಾಪಿಸಿ ಇಲ್ಲಿ ನೋಡಿರುವ ಒಳ್ಳೆಯ ವಿಚಾರಗಳು ಅದನ್ನು ನಮ್ಮ ನಾಡಿನಲ್ಲಿ ಹೇಗೆ ಅಳವಡಿಸಿಕೊಂಡು ಮುಂದುವರಿಯಬಹುದು ಎಂದೆಲ್ಲ ವಿವರಿಸಿದರು. ನಂತರ ಸಭಿಕರು ಇದೆ ವಿಷಯದ ಬಗ್ಗೆ ಒಂದೆರಡು ಉದಾಹರಣೆಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂದು ತಿಳಿಸಿದಾಗ, ದಿವ್ಯ ಸುದರ್ಶನ್ ಅವರು ಕೊರಿಂನರ ಸಮಯ ಪಾಲನೆ, ಅವರು ಹಿರಿಯರಿಗೆ ನೀಡುವ ಗೌರವಗಳ ಬಗ್ಗೆ ತಿಳಿಸಿ ನಾವು ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕ್ಕೊಲ್ಲ ಬೇಕೆಂದು ತಿಳಿಸಿದರು. ಹಾಗೆಯೇ ನಾಗರಾಜ್ ಅವರು ಕೊರಿಯಾದಲ್ಲಿ ಅವರು ಕಂಡ ಅಧ್ಬುತ ಸಾರಿಗೆ ಸಂಪರ್ಕದ ಬಗ್ಗೆ ಪ್ರಸ್ತಾಪಿಸಿ ನಮ್ಮ ನಾದಲ್ಲೂ ಇಂತಹುದೇ ವ್ಯವಸ್ತೆ ಬಂದರೆ ಹೇಗೆ traffic ಗೋಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು. ಈ ಚರ್ಚೆಯ ನಂತರ ಕಾಂತರಾಜ್ ಅವರು ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ಒಂದು ಹಾಡನ್ನು ಮನಮುಟ್ಟುವಂತೆ ಹಾಡಿದರು. ಇಷ್ಟರಲ್ಲಿ ಊಟದ ಸಮಯವಾದ್ದರಿಂದ ಊಟದ ನಂತರ ಉಳಿದ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದೆಂದು ತಿಳಿಸಿ ಸಮೀಪದಲ್ಲಿದ್ದ ಚಕ್ರ ಹೋಟೆಲ್ಗೆ ಎಲ್ಲರೂ ಹೋದೆವು. ಮೊದಲೇ ತಿಳಿಸಿದಂತೆ ರಾಹುಲ್ ಗೌಡ ಅವರು ಮುಂಚಿತವಾಗಿಯೇ ಚಕ್ರ ಹೋಟೆಲ್ ನವರಿಗೆ ತಿಳಿಸಿ ವಿಶೇಷವಾದ ಅಡುಗೆ ಮಾಡಿಸಿದ್ದರು. ಊಟದಲ್ಲಿ ನಮ್ಮ ನಾಡಿನ ಜನಪ್ರಿಯ ಮಸಾಲೆ ದೋಸೆ ಇದ್ದದ್ದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಸದಸ್ಯರೆಲ್ಲರೂ ಆತ್ಮೀಯವಾಗಿ ಒಬ್ಬರೊನ್ನೊಬ್ಬರು ಮಾತನಾಡಿಸುತ್ತ, ಪರಿಚಯ ಇಲ್ಲದವರ ಪರಿಚಯ ಮಾಡಿಕೊಳ್ಳುತ್ತ, ತಮ್ಮ ಕೊರಿಯಾ ಜೀವನದ ಬಗ್ಗೆ ಮಾತನಾಡುತ್ತ ಆಹಾರ ಸೇವಿಸಿದರು. ಊಟದ ವಿರಾಮದ ನಂತರ ಮತ್ತೊಮ್ಮೆ ಸಭಾಂಗಣದಲ್ಲಿ ಎಲ್ಲರೂ ಸೇರಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡೆವು. ಹರ್ಷ.ವಿ.ಎಸ್ ಅವರು ಬಹಳ ತಯಾರಿ ನಡೆಸಿ ರಸಪ್ರಶ್ನೆ ಕಾರ್ಯಕ್ರಮವನ್ನು ಯೆಶಸ್ವಿ ಯಾಗಿ ನಡೆಸಿಕೊಟ್ಟರು. ಎಲ್ಲ ಸದಸ್ಯರು ಬಹಳ ಹುರುಪಿನಿಂದ ಬಾಗವಹಿಸಿ ತಮ್ಮ ಸ್ಫೂರ್ತಿ ಮೆರೆದರು. ವಿಜೇತ ತಂಡದ ಎಲ್ಲ ಸದಸ್ಯರಿಗೂ ಒಂದು ನೆನಪಿನ ಕಾಣಿಕೆಯನ್ನು ಕೊಟ್ಟರು. ರಸಪ್ರಶ್ನೆ ಕಾರ್ಯಕ್ರಮದ ಮದ್ಯೆ ವಿಶ್ವನಾತ್ ಮತ್ತು ಅವರ ಶ್ರೀಮತಿಯವರು ಸಿದ್ದಪಡಿಸಿದ್ದ ಕರ್ನಾಟಕದ ಒಂದು video ತುಣುಕನ್ನು ಪ್ರದರ್ಶಿಸಿದರು. ನಿಜವಾಗಲು ಒಂದು ಅದ್ಭುತ video ಸಂಗ್ರಹಣೆ ಅದು. ತುಂಬಾ ಸಮಯ ವಿನಿಯೋಗಿಸಿ ಅರ್ಥಪೂರ್ಣವಾಗಿ video ಸಂಯೋಜಿಸಿದ್ದರು. ಕನ್ನಡ ನಾಡಿನ ಬಗ್ಗೆ ಗೊತ್ತಿಲ್ಲದವರಿಗೆ ಗೊತ್ತುಮಾಡಲು ಈ video ಒಂದು ಉತ್ತಮ ಸಾಧನ. ಈ ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ನಮ್ಮ ಕನ್ನಡ ರಾಜ್ಯೋತ್ಸವದ ಅಂತಿಮ ಭಾಗವಾದ ವಂದನಾರ್ಪಣೆಯನ್ನು ಬ್ರಿಜೇಶ್ ಅವರು ಬಹಳ ಚೆನ್ನಾಗಿ ನಡೆಸಿಕೊಟ್ಟರು. ವಂದನಾರ್ಪನೆಯ ಮಧ್ಯದಲ್ಲಿಯೇ ಮುಖ್ಯ ಅತ್ಹಿತಿಗಳಿಗೆ ಒಂದು ನೆನಪಿನ ಕಾಣಿಕೆಯನ್ನು KKK ವತಿಯಿಂದ ವಿಶ್ವನಾಥ್ ಅವರು ನೀಡಿದರು. ವಂದನಾರ್ಪನೆಯ ನಂತರ ಎಲ್ಲ ಸದಸ್ಯರ ಒಂದು group ಫೋಟೋ ತೆಗೆದು ಕಾರ್ಯಕ್ರಮವನ್ನು ಮುಗಿಸಿದೆವು. ದೇವೇಶ್ ಪಟೇಲ್ ಅವರು ಕಾರ್ಯಕ್ರಮದ ಮೊದಲಿನಿಂದ ಕೊನೆಯ ವರೆಗೂ ನಡೆದ ಘಟನಾವಳಿಗಳ ಸುಂದರ ಕ್ಷಣಗಳನ್ನು ತಮ್ಮ camera ಕಣ್ಣಿನಲ್ಲಿ ಸೆರೆಹಿಡಿದು ಎಲ್ಲರಿಗೂ ತಲಪುವಂತೆ ಮಾಡಿದರು. ಒಟ್ಟಿನಲ್ಲಿ ದೂರದ ಕೊರಿಯಾದಲ್ಲಿದ್ದು ಒಂದು ಸುಂದರ ಮತ್ತು ಅರ್ಥಪೂರ್ಣವಾದ ರಾಜ್ಯೋತ್ಸವ ಆಚರಿಸಿದ ತೃಪ್ತಿ ನೆರೆದಿದ್ದ ಎಲ್ಲ ಕನ್ನಡಿಗರಲ್ಲೂ ಮೂಡಿತ್ತು. 
decorated mother Kannadambe photo and Karnataka flag

speech by Sri. Nagaraj

my presentation

various slides of my presentation

superb song by Keshav

lunch time

singing of Kannada nada geethe by members

yet another group photo

No comments:

Post a Comment